Please enable javascript.ಗೌರವ ಡಾಕ್ಟರೇಟ್‌ಗೆ ಹೈಕದಲ್ಲಿ ಯಾರೂ ಅರ್ಹರಿಲ್ಲವೇ? - Gaurava ḍākṭarēṭ‌ge haikadalli yārū ar'harillavē? - Vijay Karnataka

ಗೌರವ ಡಾಕ್ಟರೇಟ್‌ಗೆ ಹೈಕದಲ್ಲಿ ಯಾರೂ ಅರ್ಹರಿಲ್ಲವೇ?

ವಿಕ ಸುದ್ದಿಲೋಕ | 9 Dec 2016, 4:48 pm
Subscribe

ತೀವ್ರ ಕುತೂಹಲ ಮೂಡಿಸಿದ್ದ ಗುಲ್ಬರ್ಗ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗೆ ಈ ಬಾರಿಯೂ ಯಾರಿಗೂ ನೀಡುತ್ತಿಲ್ಲ. ಅರ್ಹರಾದವರ ಹೆಸರುಗಳನ್ನು ಗುಲ್ಬರ್ಗ ವಿಶ್ವವಿದ್ಯಾಲಯ ತಜ್ಞರ ಸಮಿತಿಗೆ ಸಲ್ಲಿಸಿತ್ತು. ಈ ಸಮಿತಿಯೂ ಸಹ ಮೂವರ ಹೆಸರನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರೂ ರಾಜಭವನ ಯಾರ ಹೆಸರನ್ನೂ ಅಂತಿಮಗೊಳಿಸದೆ ಮೌನ ತಾಳಿದ್ದು ಹೈಕ ಭಾಗದವರಿಗೆ ತೀವ್ರ ಅಸಮಾಧಾನವೂ ವ್ಯಕ್ತವಾಗಿದೆ.

gaurava karge haikadalli yr arharillav
ಗೌರವ ಡಾಕ್ಟರೇಟ್‌ಗೆ ಹೈಕದಲ್ಲಿ ಯಾರೂ ಅರ್ಹರಿಲ್ಲವೇ?

ಕಲಬುರಗಿ: ತೀವ್ರ ಕುತೂಹಲ ಮೂಡಿಸಿದ್ದ ಗುಲ್ಬರ್ಗ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ಗೆ ಈ ಬಾರಿಯೂ ಯಾರಿಗೂ ನೀಡುತ್ತಿಲ್ಲ. ಅರ್ಹರಾದವರ ಹೆಸರುಗಳನ್ನು ಗುಲ್ಬರ್ಗ ವಿಶ್ವವಿದ್ಯಾಲಯ ತಜ್ಞರ ಸಮಿತಿಗೆ ಸಲ್ಲಿಸಿತ್ತು. ಈ ಸಮಿತಿಯೂ ಸಹ ಮೂವರ ಹೆಸರನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರೂ ರಾಜಭವನ ಯಾರ ಹೆಸರನ್ನೂ ಅಂತಿಮಗೊಳಿಸದೆ ಮೌನ ತಾಳಿದ್ದು ಹೈಕ ಭಾಗದವರಿಗೆ ತೀವ್ರ ಅಸಮಾಧಾನವೂ ವ್ಯಕ್ತವಾಗಿದೆ.

ಬಲ್ಲ ಮೂಲಗಳ ಪ್ರಕಾರ ಕಲಬುರಗಿ ಗ್ರಾಮೀಣ ಶಾಸಕ ಜಿ. ರಾಮಕೃಷ್ಣ, ಹೈಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಭೀಮಳ್ಳಿ, ರಾಯಚೂರಿನ ಪಾರಸಮಲ್ಲ ಸುಖಾಣಿ ಹೆಸರನ್ನು ಹೆಸರನ್ನು ಅಂತಿಮಗೊಳಿಸಿ ಸಲ್ಲಿಸಲಾಗಿತ್ತು. ಆದರೆ ವಿವಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿಲ್ಲ. ಹೀಗಾಗಿ ಈ ವರ್ಷವೂ ಗೌಡಾ ಮರೀಚಿಕೆಯಾಗಿಯೇ ಉಳಿದಿದೆ. ಇದಲ್ಲದೆ ಬೀದರ್‌ನ ಬಲಬೀರ್‌ ಸಿಂಗ್‌, ಬಿದ್ರಿ ಕಲಾವಿದ ರಶೀದ್‌ ಖಾದ್ರಿ ಮುಂತಾದವರ ಹೆಸರುಗಳು ಕೇಳಿ ಬಂದಿದ್ದವು.

ವಿಶ್ವವಿದ್ಯಾಲಯಗಳು ಕಲೆ, ಶಿಕ್ಷಣ, ಸಮಾಜ ಸೇವೆ, ಸಾಹಿತ್ಯ, ಉದ್ಯಮ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಗೌಡಾ ನೀಡುವುದು ವಾಡಿಕೆ. ಕಳೆದ ಬಾರಿ ಗೌಡಾ ನೀಡಲು ವಿಶ್ವವಿದ್ಯಾಲಯವೇ ನಿರ್ಧರಿಸಿತ್ತು. ಆದರೆ ಈಗ ವಿವಿ ಕಳುಹಿಸಿದ್ದರೂ ರಾಜ್ಯಪಾಲರು ಅಂಕಿತ ಹಾಕದೇ ಹೈಕ ಭಾಗದವರನ್ನು ಕಡೆಗಣಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಮೈಸೂರಿಗೆ ಕೊಟ್ಟಿರೂ ಕಲಬುರಗಿಗೆ ಏಕಿಲ್ಲ?:

ಪ್ರಸಕ್ತ ವರ್ಷ ರಾಜ್ಯಪಾಲರು ಮೈಸೂರು ವಿವಿ ಕಳುಹಿಸಿದ್ದ ಗೌಡಾಕ್ಕೆ ಅಂಕಿತ ಹಾಕಿದ್ದಾರೆ. ಮೈಸೂರು ಮಹಾರಾಣಿ ಪ್ರಮೋದಾದೇವಿ ಮತ್ತು ಬೌದ್ಧ ಧರ್ಮಗುರು ದಲಾಯಿಲಾಮಾ ಅವರಿಗೆ ಗೌಡಾ ನೀಡಿದ್ದಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ್ದರೂ ಗುಲ್ಬರ್ಗ ವಿವಿಗೆ ಯಾಕೆ ಕೊಟ್ಟಿಲ್ಲ ಎಂಬ ಪ್ರಶ್ನೆಗಳು ಎದುರಾಗಿವೆ. ಸಿಂಡಿಕೇಟ್‌ ಮತ್ತು ವಿದ್ಯಾವಿಷಯಕ ಪರಿಷತ್‌ನಲ್ಲಿ ಚರ್ಚೆಯಾಗಿ ಹೆಸರುಗಳನ್ನು ಅಂತಿಮಗೊಳಿಸಿ ಶಿಫಾರಸು ಮಾಡಿದ್ದವು. ಅವುಗಳನ್ನು ಪರಿಗಣಿಸದೇ ಇದ್ದಾಗ ಈ ಸಮಿತಿಗಳು ಇರಬೇಕಾದರೂ ಯಾಕೆ ಎಂಬ ಆಕ್ರೋಶವೂ ಸದಸ್ಯರಲ್ಲಿ ವ್ಯಕ್ತವಾಗಿದೆ.

ರಾಜ್ಯಪಾಲರು ಗ್ರೀನ್‌ ಸಿಗ್ನಲ್‌ ಕೊಟ್ಟಿಲ್ಲ; ವಿಸಿ

ಗೌರವ ಡಾಕ್ಟರೇಟ್‌ಗಾಗಿ ವಿವಿಯಿಂದ ಹೆಸರು ಶಿಫಾರಸು ಮಾಡಲಾಗಿತ್ತು. ಆದರೆ ರಾಜ್ಯಪಾಲರು ಯಾವುದಕ್ಕೂ ಅಂತಿಮ ನಿಶಾನೆ ನೀಡಿಲ್ಲ. ಹೀಗಾಗಿ ಈ ಬಾರಿಯೂ ಯಾವುದೇ ಗೌರವ ಡಾಕ್ಟರೇಟ್‌ ಪ್ರದಾನ ಮಾಡುವುದಿಲ್ಲ ಎಂದು ಕುಲಪತಿ ಪ್ರೊ. ಎಸ್‌. ಆರ್‌.ನಿರಂಜನ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, '' ವಿಶ್ವವಿದ್ಯಾಲಯದ ಸಿಂಡಿಕೇಟ್‌ ಮತ್ತು ಕೌನ್ಸಿಲ್‌ ಸದಸ್ಯರು ಸೂಚಿಸಿದ ಹೆಸರುಗಳನ್ನು ಶೋಧನಾ ಸಮಿತಿಗೆ ನೀಡಲಾಗಿತ್ತು. ಈ ಸಮಿತಿ ಮೂರು ಹೆಸರುಗಳನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರೂ ರಾಜ್ಯಪಾಲರ ಕಚೇರಿಯಿಂದ ಈ ಬಗ್ಗೆ ಯಾವುದೇ ಗ್ರೀನ್‌ ಸಿಗ್ನಲ್‌ ಸಿಕ್ಕಿಲ್ಲ. ಕಳೆದ ಸಲದಂತೆ ಈ ಬಾರಿಯೂ ಗೌರವ ಡಾಕ್ಟರೇಟ್‌ ಇಲ್ಲದೆ ಘಟಿಕೋತ್ಸವ ಜರುಗಲಿದೆ,'' ಎಂದರು.

ಗೌರವ ಡಾಕ್ಟರೇಟ್‌ಗೆ ಹೆಸರುಗಳನ್ನು ಸೂಚಿಸುವುದು ನಮ್ಮ ಕೆಲಸ. ಅದನ್ನು ಮಾಡಿದ್ದೆವೆ. ಅನುಮತಿ ನೀಡುವುದು ಬಿಡುವುದು ರಾಜ್ಯಪಾಲರಿಗೆ ಬಿಟ್ಟ ವಿಷಯ. ಚೆಂಡು ರಾಜಭವನದಲ್ಲಿದೆ.

ಪ್ರೊ. ಎಸ್‌. ಆರ್‌.ನಿರಂಜನ್‌, ಕುಲಪತಿ, ಗುಲ್ಬರ್ಗ ವಿವಿ

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ